ಥೈಲ್ಯಾಂಡ್ ನಲ್ಲಿ ಹೃದಯಾಘಾತ: ಕುಂದಾಪುರದ ಯುವಕ ಸಾವು

ಕುಂದಾಪುರ: ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮ ಪಂಚಾಯಿತಿ ನಿವಾಸಿ ಕಿರಣ್ ಬೆರೆಟ್ಟೋ (35) ಸೋಮವಾರ ಹೃದಯಾಘಾದಿಂದ ಥೈಲ್ಯಾಂಡ್ ನಲ್ಲಿ ಮೃತಪಟ್ಟಿದ್ದಾರೆ. ನಿವೃತ್ತ ಶಿಕ್ಷಕ ಜೇಮ್ಸ್ ಬೆರೆಟ್ಟೋ ಪುತ್ರ ಕಿರಣ್  ಥೈಲ್ಯಾಂಡ್ ನಲ್ಲಿ ಟೂಲ್ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಕಾರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಕಿರಣ್ ಇತ್ತೀಚೆಗೆ ವಿವಾಹವಾಗಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ತಮ್ಮ ಹುಟ್ಟ ಹಬ್ಬಕ್ಕೆ ಊರಿಗೆ ಬಂದು ಹಿಂದುರಿಗಿದ್ದರು. ಮೃತ ಕಿರಣ್ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ.