ನೀರು ಬಾಟಲಿ ಖರೀದಿಸುವಾಗ ನೀವು ಗಮನಿಸಬೇಕಾದ ಅಂಶಗಳು

ಉಡುಪಿ: ಬಿಸಿಲ ಝಳದಿಂದಾಗಿ ಜನರು ಕಂಡಕಂಡಲ್ಲಿ ನೀರು ಕುಡಿಯುವುದು ಸಹಜ. ಶುಚಿತ್ವ ಜಾಗೃತಿಯಿಂದಾಗಿ ಬಹುತೇಕ ಎಲ್ಲರೂ ಬಿಸಿಲೇರಿ ನೀರನ್ನು ಶುದ್ಧ ಜಲವೆಂದು ಕುಡಿಯುತ್ತಾರೆ. ಆದರೆ ಇದರಲ್ಲೂ ಮೋಸ ಮಾಡುವವರಿದ್ದಾರೆನ್ನಲಾಗುತ್ತಿದೆ. ಮಣಿಪಾಲ ಆಸ್ಪತ್ರೆಯ ನಿವೃತ್ತ ಹಿರಿಯ ಪ್ರಯೋಗಾಲಯ ತಂತ್ರಜ್ಞ ನಿತ್ಯಾನಂದ ಪಾಟೀಲ್‌ ಅವರು ಎರಡು ದಿನಗಳ ಹಿಂದೆ ಉಡುಪಿ ಕೋರ್ಟ್‌ ಎದುರಿನ ಅಂಗಡಿಯೊಂದರಿಂದ ಬಿಸ್ಲೆರಿ ನೀರಿನ ಬಾಟಲಿಯನ್ನು ಖರೀದಿಸಿ ಕುಡಿದರು. ಸಂಜೆಯಾಗುತ್ತಲೆ ನಿತ್ರಾಣ ಬಂತು. ಇವರು ಬೇರೆಲ್ಲಿಯೂ ಆ ದಿನ ಆಹಾರವನ್ನು ತೆಗೆದುಕೊಂಡಿರಲಿಲ್ಲ. ಮನೆ ಹೊರತುಪಡಿಸಿ ಇತರೆಡೆಗಳಲ್ಲಿ ಕುಡಿಯುವುದೂ ಇಲ್ಲ. […]