ಪುಟಾಣಿ ಮಗು ನಾಪತ್ತೆ ಪ್ರಕರಣ: ಅಪಹರಣ ಶಂಕೆ, ಸ್ಥಳದಲ್ಲಿ ಎಸ್ಪಿ ಮೊಕ್ಕಾಂ, ಡಿವೈಎಸ್ಪಿಯಿಂದ ತನಿಖೆ

ಕುಂದಾಪುರ: ಮನೆಯೊಳಗೆ ತಾಯಿಯೊಂದಿಗೆ‌ ಮಲಗಿದ್ದ ಪುಟಾಣಿ ಹೆಣ್ಣು ಮಗುವೊಂದನ್ನು ಮುಸುಕುಧಾರಿ ವ್ಯಕ್ತಿಯೋರ್ವ ಅಪಹರಣ ಮಾಡಿದ ಆತಂಕಕಾರಿ ಘಟನೆ ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ಗುರುವಾರ ನಸುಕಿನ ಜಾವದಲ್ಲಿ ನಡೆದಿದೆ. ಮಗು ಅಪಹರಣ ಪ್ರಕರಣ ಸದ್ಯ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದು ಮಗುವಿನ ತಾಯಿ ಪೊಲೀಸರಿಗೆ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ‌. ಎಡಮೊಗೆಯ ಕುಮ್ಟಿಬೇರು ನಿವಾಸಿ ಸಂತೋಷ ನಾಯ್ಕ್ ಮತ್ತು ರೇಖಾ ದಂಪತಿಗಳ ಒಂದು ವರ್ಷ ಮೂರು ತಿಂಗಳು ಪ್ರಾಯದ ಸಾನ್ವಿಕಾ […]