ಸೆಪ್ಟೆಂಬರ್‌ ಮೊದಲ ವಾರ ಆದಿತ್ಯ ಎಲ್‌ 1 ಉಡಾವಣೆ : ಚಂದ್ರನ ಬಳಿಕ ಸೂರ್ಯನತ್ತ ಚಿತ್ತ ಹರಿಸಿದ ಇಸ್ರೋ

ತಿರುವನಂತಪುರಂ (ಕೇರಳ) :ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಗಗನನೌಕೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ. ಚಂದ್ರಯಾನ-3 ಬಾಹ್ಯಾಕಾಶ ಯೋಜನೆಯ ಲ್ಯಾಂಡರ್ ‘ವಿಕ್ರಮ್’ ಈಗಾಗಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್​ ಆಗಿದ್ದು, ವೈಜ್ಞಾನಿಕ ಸಂಶೋಧನೆಗಳ ಕೆಲಸ ಪ್ರಾರಂಭಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥರು, “ಆದಿತ್ಯ ಎಲ್ 1 ಉಪಗ್ರಹ ಸಿದ್ಧವಾಗಿದೆ. ಈಗಾಗಲೇ ಶ್ರೀಹರಿಕೋಟಾವನ್ನು ತಲುಪಿದ್ದು, ಪಿಎಸ್‌ಎಲ್‌ವಿಗೆ ಸಂಪರ್ಕ ಹೊಂದಿದೆ. ಇಸ್ರೋದ ಮುಂದಿನ […]