ಕೇರಳ ಹೈಕೋರ್ಟ್​ ಆದೇಶ : ಪೋಕ್ಸೋ ಆರೋಪಿಗಳಿಗೂ ನಿರೀಕ್ಷಣಾ ಜಾಮೀನು

ಎರ್ನಾಕುಲಂ (ಕೇರಳ) : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್​ ಇಂದು ಆದೇಶ ನೀಡಿದೆ.ಪೋಕ್ಸೊ ಪ್ರಕರಣಗಳಲ್ಲಿ ಪ್ರಾಥಮಿಕ ಹಂತದ ಸಾಕ್ಷ್ಯಾಧಾರಗಳಿಲ್ಲದಿದ್ದಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಕೊಡಬಹುದು ಎಂದು ಕೇರಳ ಹೈಕೋರ್ಟ್​ ಆದೇಶ ನೀಡಿದೆ. ಸುಳ್ಳು ಆರೋಪದ ಮೇಲೆ ಅಮಾಯಕರ ವಿರುದ್ಧ ಪ್ರಕರಣ ದಾಖಲಾದ ಹಲವು ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಇಂತಹ ಸಂದರ್ಭಗಳಲ್ಲಿ ವಾಸ್ತವಾಂಶಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಶಿಕ್ಷಿಸುವುದಷ್ಟೇ ಅಲ್ಲ. ಜೊತೆಗೆ ಅಮಾಯಕರನ್ನೂ ರಕ್ಷಿಸುವುದು ಮುಖ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. […]