ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಪತನ: ಪೈಲಟ್ ಸಹಿತ ಮೂವರ ದುರ್ಮರಣ

ಕಲ್ಲಿಕೋಟೆ: ದುಬೈನಿಂದ ಕೇರಳದ ಕ್ಯಾಲಿಕಟ್ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕಲ್ಲಿಕೋಟೆಯ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾನೆ. ಹಲವಾರು ಮಂದಿಗೆ ಗಾಯ ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಲ್ಯಾಡಿಂಗ್ ವೇಳೆ ರನ್ ವೇ ಯಲ್ಲಿ ಜಾರಿದ ಪರಿಣಾಮ ದುರ್ಘಟನೆ ನಡೆದಿದೆ. ವಿಮಾನ ತುಂಡಾಗಿ ಎರಡು ಭಾಗವಾಗಿದೆ. ವಿಮಾನದಲ್ಲಿ 174 ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಆರು ಮಂದಿ ಸಿಬ್ಬಂದಿ ಇದ್ದರು ಎನ್ನಲಾಗಿದೆ.