ಮಂಗಳೂರು ವಿವಿ‌ ಮಾಜಿ ಕುಲಪತಿ ಬೈರಪ್ಪ ಆಹ್ವಾನ ಖಂಡಿಸಿ ಎಬಿವಿಪಿ‌‌ ಪ್ರತಿಭಟನೆ

ಮಂಗಳೂರು: ಮಂಗಳೂರು ವಿವಿಯ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಹಿಂದಿನ ಕುಲಪತಿ ಕೆ. ಬೈರಪ್ಪ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಎಬಿವಿಪಿ ವಿಧ್ಯಾರ್ಥಿಗಳಿಂದ ಗುರುವಾರ ಪ್ರತಿಭಟನೆ ನಡೆಯಿತು. ಮಂಗಳ ಅಡಿಟೋರಿಯಂ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಗರಣ ಮಾಡಿದ ಬೈರಪ್ಪ ಅವರಿಗೆ ಹೇಗೆ ಆಹ್ವಾನ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬೈರಪ್ಪ ಕಾರ್ಯಕ್ರಮಕ್ಕೆ ಬಂದಲ್ಲಿ ಘೇರಾವ್ ಹಾಕುತ್ತೇವೆ ಎಂದು ಎಬಿವಿಪಿಯ […]