ಉಡುಪಿ: ಕವಿವೃಕ್ಷ ಬಳಗ ಉದ್ಘಾಟನೆ; ಕವಿಗೋಷ್ಠಿ 

ಉಡುಪಿ: ಕವಿವೃಕ್ಷ ಬಳಗ ಉಡುಪಿ ಇದರ ಉದ್ಘಾಟನೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಪುಸ್ತಕ ಬಿಡುಗಡೆ, ಪದಗ್ರಹಣ, ಉಪನ್ಯಾಸ ಕಾರ್ಯಾಗಾರ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು ಕಲ್ಸಂಕ- ಶ್ರೀಕೃಷ್ಣ ಪ್ರಜ್ಞಾ ಪ್ರತಿಷ್ಠಾನ ಸಭಾ ಭವನದಲ್ಲಿ  ನಡೆಯಿತು. ಕವಿವೃಕ್ಷ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಪಾಂಡೇಲು ಅವರು ನೆರವೇರಿಸಿದರು. ಕಾರ್ಯಕ್ರಮದದಲ್ಲಿ ಲೇಖಕಿ ಶೋಭಾ ಹರಿಪ್ರಸಾದ್ ಕುಕ್ಕಿಕಟ್ಟೆ ಅವರು ಬರೆದ ‘ಚಿಣ್ಣರ ಕನಸಿನ ಬಣ್ಣದ ಲೋಕ’ ಕವನ ಸಂಕಲನವನ್ನು ಗಣೇಶ್ ಪ್ರಸಾದ್ […]