ವಿದೇಶಿ ಉದ್ಯೋಗಗಳ ವಲಸೆ ಮಾಹಿತಿ ಕೇಂದ್ರ ಆರಂಭ
ಉಡುಪಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲೆಯ ಯುವಜನತೆಗೆ ವಿದೇಶಿ ಉದ್ಯೋಗಗಳ ಕುರಿತು ಮಾಹಿತಿ ಒದಗಿಸಲು ಮಣಿಪಾಲ ಜಿಲ್ಲಾಧಿಕಾರಿ ಕಛೇರಿಯ ಸಂಕೀರ್ಣದಲ್ಲಿರುವ ಕೌಶಲ್ಯಾಭಿವೃದ್ಧಿ ಕಛೇರಿಯಲ್ಲಿ ವಲಸೆ ಮಾಹಿತಿ ಕೇಂದ್ರ ಆರಂಭಿಸಲಾಗಿದ್ದು, ಆಸಕ್ತರು ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಮೊ.ನಂ:7022832166, ದೂ.ಸಂಖ್ಯೆ:0820-2574869 ನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.