ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಮೊಗವೀರ ಸಮುದಾಯದ ಕಡೆಗಣನೆ ಸಲ್ಲದು: ಸಚಿನ್ ಸುವರ್ಣ ಪಿತ್ರೋಡಿ

ಮೊಗವೀರ ಸಮಾಜವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ,ದೈವಸ್ಥಾನ ಹಾಗೂ ಮಠ-ಮಂದಿರಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವಂತಹ ಸಮಾಜ. ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿಯಲ್ಲಿ ತನ್ನದೇ ಆದಂತಹ ಕೊಡುಗೆಯನ್ನು ನೀಡಿದಂತಹ ಮೊಗವೀರ ಸಮುದಾಯಕ್ಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡದಿರುವುದು – ಮೊಗವೀರ ಸಮುದಾಯದ ಬಗೆಗಿನ ಕಡೆಗಣನೆಯನ್ನು ಪ್ರತಿಬಿಂಬಿಸುತ್ತಿದೆ ಸರಕಾರದಿಂದ ನಿಯೋಜಿತವಾಗುವ ಈ ವ್ಯವಸ್ಥಾಪನ ಸಮಿತಿಯಲ್ಲಿ ಮೋಗವೀರ ಸಮುದಾಯಕ್ಕೆ ಪ್ರಾತಿನಿಧ್ಯ ಲಭಿಸಬೇಕು- ಸ್ಥಳೀಯ ಕಾಂಗ್ರೆಸ್ ನಾಯಕರು ಮಾಧ್ಯಮದಲ್ಲಿ ವ್ಯಥಾರೋಪ ಮಾಡುತ್ತಿರುವುದು ಹಾಗೂ ಬಾಲಿಷ ಹೇಳಿಕೆಗಳನ್ನು […]