ಕಾಪು: ಮೀನುಗಾರ ಮೃತ್ಯು.

ಕಾಪು: ಉದ್ಯಾವರ ಪಿತ್ರೋಡಿಯಲ್ಲಿ ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ದೋಣಿಯ ವಾಡಿ ಮೇಲೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮೇ.30ರಂದು ನಡೆದಿದೆ. ಮೃತ‌ ಮೀನುಗಾರನನ್ನು ಪಿತ್ರೋಡಿಯ ಉದ್ಯಾವರ ನಿವಾಸಿ ಅನಿಲ್‌ (46) ಎಂದು ಗುರುತಿಸಲಾಗಿದೆ. ವಾಸು ಅವರಿಗೆ ಸೇರಿದ ದೋಣಿಯಲ್ಲಿ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದು, ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ಆಯತಪ್ಪಿ ದೋಣಿಯೊಳಗೆ ಅಳವಡಿಸಿರುವ ವಾಡಿ ಮೇಲೆ ತಲೆಕೆಳಗಾಗಿ ಬಿದ್ದು ಗಂಭೀರ ಗಾಯಗೊಂಡಿದ್ದು, ಅವರ ಜತೆಗಿದ್ದ ಭರತೇಶ್‌ ಅನಿಲ್‌ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. […]