ಕಟೀಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ದೇವಿಯ ಸನ್ನಿಧಾನದಲ್ಲಿ ವಿಶೇಷ ಯಕ್ಷಗಾನ “ತಾಳ ಮದ್ದಳೆ ಕಛ್ ದೇವಯಾನಿ”

ಮಂಗಳೂರು: ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಟೀಲ್ ದೇವಿಯ ಸನ್ನಿಧಾನದಲ್ಲಿ ಶನಿವಾರ ವಿಶೇಷ ಯಕ್ಷಗಾನ “ತಾಳ ಮದ್ದಳೆ ಕಛ್ ದೇವಯಾನಿ” ಪ್ರಸಂಗ ಜರಗಿತು. ವೇದಿಕೆಯಲ್ಲಿಯಕ್ಷಗಾನದ ಹಿರಿಯ ಕಲಾವಿದ 92 ವರ್ಷದ ಡಾ. ಕೂಳೂರು ರಾಮಚಂದ್ರ ರಾವ್, ಕಟೀಲ್ ದೇವಳದ ವೇ.ಮೂ. ಹರಿ ನಾರಾಯಣ ದಾಸ ಅಸ್ರಣ್ಣ, ಸು. ವಿಶ್ವೇಶ್ವರ ಭಟ್, ಪಾಶುಪತಿ ಶಾಸ್ತ್ರೀ, ಭಾಗವತಿಕೆಯಲ್ಲಿ ಕಟೀಲ್ ಮೇಳದ ದೇವಿ ಪ್ರಸಾದ ಆಳ್ವ, ಮದ್ದಳೆ: ಯೋಗೀಶ ಆಚಾರ್ಯ, ಚಂಡೆ: ದೇವಿಪ್ರಸಾದ ಕಟೀಲ್ ಸಹಕರಿಸಿದರು.