ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆ : ಸ್ವಾತಂತ್ರೋತ್ಸವ ಸಂಭ್ರಮಾಚರಣೆ
ಕಟಪಾಡಿ: ಕಟಪಾಡಿಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಟಪಾಡಿಯ ಎಸ್.ವಿ.ಎಸ್ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದರ ಮುಖಾಂತರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ್ರಹ್ಮಾವರ ವಲಯದ ಕರ್ನಾಟಕ ಅರಣ್ಯ ಇಲಾಖೆಯ ಗಸ್ತು ವನಪಾಲಕರಾದ (Beat Forester) ಹವಾಲ್ದಾರ್ ಶ್ರೀ ಕೇಶವ ಪೂಜಾರಿ ಎಂ ಅವರು ದ್ವಜಾರೋಹಣ ನೆರವೇರಿಸಿ, “ದೇಶ ಸೇವೆಯೇ ಈಶ ಸೇವೆ ” ಎಂಬ ನುಡಿ ಮುತ್ತಿನಂತೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದೆಂದರೆ ಅದೊಂದು ಹೆಮ್ಮೆಯ ವಿಚಾರ […]