ಕಟಪಾಡಿ: ಮಹಿಳೆಯೊಬ್ಬರು ಆಟೊದಲ್ಲಿ ಬಿಟ್ಟುಹೋಗಿದ್ದ 50 ಸಾವಿರ ಮರಳಿಸಿ ಮಾದರಿಯಾದ ಆಟೊ ಚಾಲಕ
ಉಡುಪಿ: ಮಹಿಳೆಯೊಬ್ಬರು ತನ್ನ ಆಟೊ ರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ 50 ಸಾವಿರ ರೂ.ಗಳನ್ನು ಮರಳಿ ನೀಡುವ ಮೂಲಕ ಆಟೊ ಚಾಲಕ ಮಾನವೀಯತೆ ಮೆರೆದ ಘಟನೆ ಕಟಪಾಡಿಯಲ್ಲಿ ನಡೆದಿದೆ. ಆಟೊ ಚಾಲಕ ಅಂಬಲಪಾಡಿ ಜಯ ಶೆಟ್ಟಿ ಅವರ ಆಟೊದಲ್ಲಿ ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಕಟಪಾಡಿಗೆ ಬಾಡಿಗೆ ಮಾಡಿಕೊಂಡು ಬಂದಿದ್ದರು. ಆದರೆ ಅವರು ಇಳಿಯುವ ಗಡಿಬಿಡಿಯಲ್ಲಿ 50 ಸಾವಿರ ರೂ.ಗಳ ಚೀಲವನ್ನು ರಿಕ್ಷಾದಲ್ಲೇ ಮರೆತುಬಿಟ್ಟು ಹೋಗಿದ್ದರು. ಆ ಮಹಿಳೆಯನ್ನು ಕಟಪಾಡಿ ಬಸ್ ನಿಲ್ದಾಣಕ್ಕೆ ಬಿಟ್ಟು ಉಡುಪಿಯ ಅಂಬಲಪಾಡಿ […]