ಮಣಿಪಾಲ ಭೇಟಿ ಖುಷಿ ಕೊಟ್ಟಿದೆ: ರಾಹುಲ್ ದ್ರಾವಿಡ್

ಮಣಿಪಾಲ:ಮಣಿಪಾಲ ಭೇಟಿ ಅವಿಸ್ಮರಣೀಯ ಅನುಭವ ಕೊಟ್ಟಿದೆ.ಏಕೆಂದರೆ ಮಣಿಪಾಲ ಸಮೂಹವು ತನ್ನ ಸಂಶೋಧನಾ ಚಟುವಟಿಕೆಗಳಿಗೆ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿಗೆ ಹೆಸರುವಾಸಿಯಾಗಿದೆ ಎಂದು ಖ್ಯಾತ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಅವರು ಮಂಗಳವಾರ ಮಣಿಪಾಲ ಆಸ್ಪತ್ರೆಗಳ ಪ್ರಚಾರ ರಾಯಭಾರಿಯಾಗಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಭ್ರೂಣ ಶಿಶು ಔಷಧ ವಿಭಾಗ ಮತ್ತು ಹಿರಿಯ ನಾಗರೀಕರ ಚಿಕಿತ್ಸಾಲಯ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು. “ಭ್ರೂಣದ ಮೆಡಿಸಿನ್ ಮತ್ತು ಹಿರಿಯ ನಾಗರೀಕರ ಚಿಕಿತ್ಸಾಲಯವು ವೈದ್ಯಕೀಯ ವಿಜ್ಞಾನದಲ್ಲಿ ಒಂದು ಪ್ರಗತಿಯಾಗಿದ್ದು ಮತ್ತು ಇದು ಸಾರ್ವಜನಿಕರಿಗೆ ಬಹಳಷ್ಟು […]