ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆ
ಮಣಿಪಾಲ: “ಸುರಕ್ಷಿತ ರಕ್ತ ಮತ್ತು ರಕ್ತ ವರ್ಗಾವಣೆಗಾಗಿ ಉತ್ಪನ್ನಗಳ” ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಕ್ತ ಸಂಬಂಧಿತ ಉತ್ಪನ್ನಗಳು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕವಾಗಿವೆ. ಈ ದಿನವು ಸ್ವಯಂಸೇವಕರು ಮತ್ತು ರಕ್ತದಾನಿಗಳಿಗೆ ಅವರ ಕೊಡುಗೆಗಳಿಗಾಗಿ ಧನ್ಯವಾದ ಹೇಳುವ ಅವಕಾಶವನ್ನು ಸೂಚಿಸುತ್ತದೆ. 2023 ರ ಘೋಷ ವಾಕ್ಯ “ರಕ್ತ ನೀಡಿ, ಪ್ಲಾಸ್ಮಾ ನೀಡಿ, ಜೀವನವನ್ನು ಹಂಚಿಕೊಳ್ಳಿ, ಆಗಾಗ ಹಂಚಿಕೊಳ್ಳಿ”. ವಿಶ್ವ ಆರೋಗ್ಯ ಸಂಸ್ಥೆಯ […]
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾದಿಯರಿಗಾಗಿ ಪಾಲಿಯೆಟಿವ್ ಆರೈಕೆ ಕೋರ್ ತರಬೇತಿ ಕಾರ್ಯಕ್ರಮ
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪಾಲಿಯೆಟಿವ್ ಔಷಧ ವಿಭಾಗದ ಸಹಯೋಗದೊಂದಿಗೆ ನರ್ಸಿಂಗ್ ಸೇವೆಗಳ ವಿಭಾಗವು ಡಾ. ಟಿಎಂಎ ಪೈ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 28 ರಿಂದ 30 ರ ವರೆಗೆ ದಾದಿಯರಿಗಾಗಿ ಎಂಡ್ ಆಫ್ ಲೈಫ್ ನರ್ಸಿಂಗ್ ಎಜುಕೇಶನ್ ಕನ್ಸೋರ್ಷಿಯಂ, ಎಲ್ ನೆಕ್/ ಪಾಲಿಯೆಟಿವ್ ಆರೈಕೆ ಕೋರ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಮಿಸ್ ಹನಿಫೆ ಮೆಕ್ ಗಾಮ್ ವೆಲ್, ಆರ್ ಎನ್, ಎಂ ಎಸ್ ಎನ್ , ಎಂ ಟಿ ಸಿ ಎಂ , ಪಿ […]
ಕೊಡವೂರು: ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಯುವಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘ ಕೊಡವೂರು, ಕೊಡವೂರು ಫ್ರೆಂಡ್ಸ್ ಕೊಡವೂರು, ಗೆಳೆಯರ ಬಳಗ ಲಕ್ಷ್ಮೀ ನಗರ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇದರ ಸಹಯೋಗದೊಂದಿಗೆ ಭಾನುವಾರ ಜುಲೈ10 ರಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆವರೆಗೆ ವಿಪ್ರಶ್ರೀ ಸಭಾಭವನ ಕೊಡವೂರು ಇಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಸಂಪೂರ್ಣವಾಗಿ ಉಚಿತವಾಗಿ ನೀಡುವ ಸೇವೆಯನ್ನು ಪಡೆದುಕೊಳ್ಳಬೇಕಾಗಿ ಕಾರ್ಯಕ್ರಮದ ಸಂಯೋಜಕರಾದ […]
ಮಂಗನ ಕಾಯಿಲೆ ರೋಗಕ್ಕೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಚಿಕಿತ್ಸೆ: ಜೀವ ಹಾನಿಯಿಲ್ಲ
ಮಣಿಪಾಲ: ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 57 ಜನರು ಶಂಕಿತ ಮಂಗನ ಕಾಯಿಲೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಸುಮಾರು 19 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ವರದಿಯಾಗಿದೆ. ಇದರಲ್ಲಿ 4 ಜನ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 15 ಜನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಮಂಗನ ಕಾಯಿಲೆಯಿಂದ ಯಾರೂ ಕೂಡ ಸಾವನ್ನಪ್ಪಿಲ್ಲ ಎನ್ನುವ ಮಾಹಿತಿ […]