ಕಾರವಾರದ ಜಲಂತರ್ಗಾಮಿ ನಿರೋಧಕ ನೌಕೆಗೆ ‘ಅಂಜುದೀವ್’ ದ್ವೀಪದ ಹೆಸರಿಟ್ಟ ನೌಕಾಪಡೆ

ಕಾರವಾರ: ಭಾರತೀಯ ನೌಕಾಪಡೆಗೆ ಹೊಸದಾಗಿ ನಿಯೋಜನೆಗೊಂಡಿರುವ ಜಲಾಂತರ್ಗಾಮಿ ನಿರೋಧಕ ನೌಕೆಗೆ ಕಾರವಾರ ಸಮೀಪದ ಐತಿಹಾಸಿಕ ಅಂಜುದೀವ್ ದ್ವೀಪದ ಹೆಸರಿಡಲಾಗಿದೆ. ಭಾರತೀಯ ನೌಕಾ ಸೇನೆಗೆ ಸೇರ್ಪಡೆಯಾಗುವ ನೌಕೆಗಳಿಗೆ ದೇಶದ ಪ್ರಮುಖ ಊರುಗಳ, ದ್ವೀಪಗಳ ಹೆಸರಿಡುವ ವಾಡಿಕೆ ಇದೆ. ಅಂತೆಯೇ ಭಾರತೀಯ ನೌಕಾಪಡೆಗೆ ಹೊಸದಾಗಿ ಸೇರ್ಪಡೆಯಾದ ಜಲಾಂತರ್ಗಾಮಿ ನಿರೋಧಕ ನೌಕೆಗೆ ಅಂಜುದೀವ್ ದ್ವೀಪದ ಹೆಸರಿಡಲಾಗಿದೆ. ಕೊಲ್ಕತ್ತಾ ಗಾರ್ಡನ್ ರಿಚ್ ಶಿಪ್‌ಬಿಲ್ಡ್ ಅಂಡ್​ ಎಂಜಿನಿಯರ್ಸ್ ಎಂಬ ಕಂಪನಿಯಲ್ಲಿ ಹೆಚ್ಚಾಗಿ ದೇಸಿ ತಂತ್ರಜ್ಞಾನ ಹಾಗೂ ಉಪಕರಣ ಬಳಸಿ ನಿರ್ಮಾಣ ಮಾಡಲಾದ ನೌಕೆಯನ್ನು ಇತ್ತೀಚೆಗೆ […]