“ಈ ನಗುವಿನಲ್ಲೇ ದೇವರಿದ್ದಾನೆ” : ಕಾರ್ತಿಕ್ ಜೈನ್ ಕ್ಲಿಕ್ಕಿಸಿದ ಚಿತ್ರ

ಕಾರ್ತಿಕ್ ಜೈನ್, ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ. ಚಿತ್ರಗಳಲ್ಲಿ ಮೌನವನ್ನು, ನಗುವನ್ನು, ಅಪರೂಪದ ಭಾವನೆಗಳನ್ನು ಸೆರೆಹಿಡಿಯುವ ಇವರಿಗೆ ಛಾಯಾಗ್ರಹಣ ಒಂದು ಪ್ರವೃತ್ತಿ. ತಮ್ಮ ಸುತ್ತಮುತ್ತಲಿನ ಪರಿಸರ, ವ್ಯಕ್ತಿಗಳನ್ನು ಕೆಮರಾದಲ್ಲಿ ವಸ್ತುವಾಗಿಸುವ ಇವರು, ಚಿತ್ರಗಳಲ್ಲೇ ಚೆಂದದ ಕತೆ ಹೇಳುತ್ತಾರೆ.