ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣ: ಆಡಿಯೋ ಟೇಪ್ ತನಿಖೆ: ಬೊಮ್ಮಾಯಿ

ಬೆಂಗಳೂರು : ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣ ಸಂಬಂಧ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಹೊಸ ಆಡಿಯೋ ಟೇಪ್ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಹೊಸ ಆಡಿಯೋ ಟೇಪ್ ಬಗ್ಗೆಯೂ ತನಿಖೆ ನಡೆಸಲಾಗುವುದು. ನಾನು ಆ ಆಡಿಯೋ ಕೇಳಿಲ್ಲ. ಆಡಿಯೋದಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಆ ಇಬ್ಬರು ಯಾರು? ಎಲ್ಲವೂ ತನಿಖೆ ಆಗುತ್ತದೆ. ತಪ್ಪಿತಸ್ಥರು ಯಾರಾಗಿದ್ದರೂ […]

ಆಸ್ಪತ್ರೆ ದಾಖಲಾಗುವ ಮೊದಲಿನ ರೋಗಲಕ್ಷಣರಹಿತ ರೋಗಿಗಳ ಮುನ್ನೆಚ್ಚರಿಕಾ ಕೋವಿಡ್ ಪರೀಕ್ಷೆ ಸ್ಥಗಿತ: ಸಚಿವ ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿದ್ದು, ರೋಗಲಕ್ಷಣವಿಲ್ಲದ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡುವ ಮುನ್ನ, ಶಸ್ತ್ರ ಚಿಕಿತ್ಸೆ, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ವಿಧಾನಗಳನ್ನು ಮಾಡುವ ಮೊದಲು ಮಾಡಬೇಕಾಗಿದ್ದ ಕೋವಿಡ್-19 ಮುನ್ನೆಚ್ಚರಿಕಾ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಕೆ ಬುಧವಾರ (ಫೆ.23) ಮಾಹಿತಿ ನೀಡಿದ್ದಾರೆ. ಇದು ಹಿಂದಿನ ಕೋವಿಡ್-19 ಪಾಸಿಟಿವ್ ಆಗಿದ್ದ ರೋಗಿಗಳು, ಗುಣಮುಖರಾದವರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನಾನ್- ಕೋವಿಡ್ […]

ಕರ್ನಾಟಕದಲ್ಲಿ ಬಿಜೆಪಿ‌ ಕೈ ಹಿಡಿದ ಜನತೆ, ಕಾಂಗ್ರೆಸ್ ಗೆ ತೀವ್ರ ಮುಖಭಂಗ 

ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ್ಕದಲ್ಲಿ ಅತ್ಯಂತ ಬಲಿಷ್ಠ ವಾಗಿದ್ದ ಕಾಂಗ್ರೆಸ್ ಈ ಲೋಕಸಭಾ ಚುಣಾವಣೆಯಲ್ಲಿ ಮಕಾಡೆ ಮಲಗಿದೆ. ಹೀಗಾಗಿ ಕಾಂಗ್ರೆಸ್ ಮಾತ್ರವಲ್ಲದೇ ಆಡಳಿತ ನಡೆಸುತ್ತಿರುವ ದೋಸ್ತಿ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ರಾಜ್ಯದ 28  ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಗೆಲುವಿನ ಸನಿಹದಲ್ಲಿದೆ. 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ‌ ಗೆಲುವು ಖಚಿತಗೊಂಡಿದೆ. ಬಿಜೆಪಿ‌ ಅಲೆಯಿಂದಾಗಿ ಕರ್ನಾಟಕದಲ್ಲಿ ಪ್ರಮುಖ ನಾಯಕರೇ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ‌ ಒಂದೊಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, ಗೆಲುವಿನ ಭರವಸೆ ಮೂಡಿಸಿದೆ. […]