60 ವರ್ಷಗಳ ಬಳಿಕವೂ ಗಟ್ಟಿಮುಟ್ಟಾಗಿರುವ ಅಣೆಕಟ್ಟೆ: ಶರಾವತಿ ಒಡಲಲ್ಲಿ ಮರೆಯಾಗಿದ್ದ ‘ಮಡೇನೂರು ಡ್ಯಾಂ’ ಮತ್ತೆ ಗೋಚರ

ಶಿವಮೊಗ್ಗ: ಶರಾವತಿ ನದಿಯ ಗರ್ಭದಲ್ಲಿ ಹುದುಗಿ 60 ವರ್ಷಗಳು ಕಳೆದರೂ ‘ಮಡೇನೂರು ಅಣೆಕಟ್ಟೆ’ ಇಂದಿಗೂ ತನ್ನ ಸೌಂದರ್ಯವನ್ನು‌ ಹಾಗೆಯೇ ಉಳಿಸಿಕೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಈ ಅಣೆಕಟ್ಟೆ ಮುಳುಗಿ ಹೋಗಿದೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಮಡೇನೂರು ಅಣೆಕಟ್ಟೆ ಮತ್ತೆ ಹೊರ ಜಗತ್ತಿಗೆ ಕಾಣ ಸಿಗುತ್ತಿದೆ. ಮಡೇನೂರು ಡ್ಯಾಂ, ಹಿರೇಭಾಸ್ಕರ ಡ್ಯಾಂ ಎಂದು ಕರೆಯುತ್ತಾರೆ. ಮಲೆನಾಡಿನ ಕಾನನದ ಗರ್ಭದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಕನಸಿನ ಕೂಸಾಗಿ ನಿರ್ಮಾಣಗೊಂಡು, ಅಕಾಲಿಕವಾಗಿ ಅವಸಾನ ಹೊಂದಿದ್ದ ಮಡೇನೂರು ಅಥವಾ ಹಿರೇಭಾಸ್ಕರ ಡ್ಯಾಂ […]