ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಧರ್ಮ ಧರ್ಮದ ನಡುವೆ ಸಂಘರ್ಷ ಬೇಡ; ಪ್ರಣವಾನಂದ ಸ್ವಾಮೀಜಿ ಕರೆ

ಉಡುಪಿ: ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು. ಧರ್ಮ ಧರ್ಮದ ನಡುವೆ ಘರ್ಷಣೆಗೆ ಅವಕಾಶ ಮಾಡಿಕೊಡಬಾರದು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶರಣಬಸವೇಶ್ವರ ಮಠಾಧಿಪತಿ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸಂವಿಧಾನವೇ ನಮ್ಮ ದೇವರು. ನಮ್ಮ ಆಚಾರ ವಿಚಾರ ಅದಕ್ಕೆ ಧಕ್ಕೆಯಾಗಬಾರದು. ಅವರವರ ಧರ್ಮದ ಆಚಾರ ವಿಚಾರಗಳನ್ನು‌ ಅವರು ಆಚರಣೆ ಮಾಡಿಕೊಂಡು ಹೋಗಲಿ.‌ ಅದು ಬಿಟ್ಟು ಒಂದು ಧರ್ಮದ ಸಂಪ್ರದಾಯ, ಆಚಾರ-ವಿಚಾರಗಳನ್ನು […]