ರಾಜ್ಯದಲ್ಲಿ ಭಾರೀ ಇಳಿಕೆ ಕಂಡ ಕೊರೋನಾ ಪ್ರಕರಣಗಳು

ಬೆಂಗಳೂರು: ರಾಜ್ಯದ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. 83 ದಿನಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 4 ಸಾವಿರದೊಳಗೆ ಹೊಸ ಪ್ರಕರಣ ವರದಿಯಾಗಿದೆ. ಮಂಗಳವಾರ ರಾಜ್ಯದಲ್ಲಿ 3,709 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 139 ಮಂದಿ ಸಾವನ್ನಪ್ಪಿದ್ದಾರೆ. 8,111 ಮಂದಿ ಗುಣಮುಖರಾಗಿದ್ದಾರೆ. ಮಾರ್ಚ್ 30 ರಂದು ಶೇ.2.78 ಪಾಸಿಟಿಟಿ ದರದಲ್ಲಿ 2,975 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದಾದ 83 ದಿನಗಳ ಬಳಿಕ ಮೊದಲ ಬಾರಿಗೆ 4 ಸಾವಿರದೊಳಗೆ ಹೊಸ ಕೇಸ್ ಪತ್ತೆಯಾಗಿವೆ. […]