ಖ್ಯಾತ ಯಕ್ಷಗಾನ ಕಲಾವಿದ ನಾರಾಯಣ ಹಾಸ್ಯಗಾರ ಇನ್ನಿಲ್ಲ
ಹೊನ್ನಾವರ: ಪ್ರಸಿದ್ಧ ಕರ್ಕಿ ಪರಂಪರೆಯ ಉತ್ಕೃಷ್ಟ ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಹಾಸ್ಯಗಾರ, ಕರ್ಕಿ (89) ಅವರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಯಕ್ಷಗಾನಕ್ಕೆ ಅಪಾರ ಕೊಡುಗೆ ನೀಡಿದ ಕರ್ಕಿ ಹಾಸ್ಯಗಾರ ಮನೆತನದ ಪ್ರತಿನಿಧಿಯಾಗಿರುವ ನಾರಾಯಣ ಪರಮಯ್ಯ ಹಾಸ್ಯಗಾರ ಆರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಕಲಾಸೇವೆ ನೀಡಿದ ಸಾಧಕರು. ಆಂಗಿಕ ಅಭಿನಯ, ನಿಧಾನಗತಿಯ ಹೆಜ್ಜೆಗಾರಿಕೆ, ಎಲ್ಲ ಬಗೆಯ ಪರಿಪಕ್ವ ಕುಣಿತಗಳಲ್ಲಿ ಪ್ರಭುತ್ವ ಹೊಂದಿರುವ ಹಾಸ್ಯಗಾರ 82ರ ಇಳಿವಯಸ್ಸಿನಲ್ಲೂ ಕುಣಿಯುವ ಉತ್ಸಾಹ ಉಳಿಸಿಕೊಂಡಿದ್ದರು.ಬಡಗು ಮತ್ತು ಬಡಾಬಡಗು ಪ್ರಕಾರಗಳಲ್ಲಿಯೂ ಕರ್ಕಿ ಅವರ […]