ಕಾರ್ಕಳ ಉತ್ಸವಕ್ಕೆ ರಂಗೇರಿ ನಿಂತಿದೆ ಶಿಲ್ಪಕಾಶಿ ಕಾರ್ಕಳ: ಎಷ್ಟೆಲ್ಲಾ ಕೆಲಸ ಆಗಿದೆ ಗೊತ್ತಾ?

ಕಾರ್ಕಳ :ಕೊನೆಗೂ ಕಾರ್ಕಳ‌ ಉತ್ಸವಕ್ಕೆ ಅಖಾಡ ಸಿದ್ದಗೊಂಡಿದೆ. ಶಿಲ್ಪಕಾಶಿ ಎಂದೇ ಜನಮಾನಸದಲ್ಲಿ ಛಾಪು ಹೊತ್ತಿರುವ ಕಾರ್ಕಳದಲ್ಲೀಗ ಎಲ್ಲೆಡೆ ಜಗಮಗ, ಸಂಭ್ರಮ, ಸಡಗರದ ಅಬ್ಬರ. ಮಾ.10 ರಿಂದ ಮಾ.20 ರವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಭರ್ಜರಿ ಚಾಲನೆ ಸಿಗಲಿದೆ. ಬೀದಿ ಬೀದಿಗೂ ಬೆಳಕಿನ ಉತ್ಸವ: ಕಾರ್ಕಳ ನಗರದಲ್ಲೀಗ ಪ್ರತೀ ಬೀದಿ ಬೀದಿಯೂ ಸಿಂಗಾರಗೊಂಡಿದ್ದು ಪ್ರತೀ ಬೀದಿಯನ್ನೂ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ.  ಮೈಸೂರು ಚಾಮುಂಡೇಶ್ವರಿ ವಿದ್ಯುತ್ ನಿಗಮ ಮಂಡಳಿಯ ಇಂಜಿನಿಯರ್ ಗಳು ಈಗಾಗಲೆ ಸಂಪೂರ್ಣ  ವಿದ್ಯುತ್ […]