Tag: #KARKALA#RAIN
-
ಕಾರ್ಕಳ ತಾಲೂಕಿನ ವಿವಿಧೆಡೆ ಉತ್ತಮ ಮಳೆ, ಹಾನಿ
ಕಾರ್ಕಳ: ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಗ್ರಾಮೀಣ ಭಾಗವಾದ ಹೊಸ್ಮಾರು, ಮಾಳ, ಬಜಗೋಳಿ, ಈದು ಪ್ರದೇಶದಲ್ಲಿ ಬಲವಾದ ಗಾಳಿ ಬೀಸಿದೆ. ಸಿಡಿಲು ಮಿಂಚಿನ ಆರ್ಭಟ ಕೂಡ ಹೆಚ್ಚಾಗಿತ್ತು.ನಗರದಲ್ಲಿ ಸಾಮಾನ್ಯ ಮಳೆಯಾಗಿದೆ. ಮಾಳ, ಬಜಗೋಳಿ, ಹೊಸ್ಮಾರು ಭಾಗದಲ್ಲಿ ಅಡಿಕೆ ಮರಗಳು ನೆಲಕಚ್ಚಿವೆ. ಪಾಜೆಗುಡ್ಡೆ ತಿರುವಿನಲ್ಲಿ ಭಾರೀ ಸುಳಿ ಗಾಳಿ ಬೀಸಿದ್ದು ಹೆದ್ದಾರಿಯಲ್ಲಿ ಸಂಚರಿಸುವವರು ಆತಂಕಕ್ಕೆ ಈಡಾಗಿದ್ದರು. ಸುಮಾರು ಅರ್ಧ ತಾಸು ಈ ಭಾಗದಲ್ಲಿ ಮಳೆ ಸುರಿದಿದೆ. ವಿದ್ಯುತ್ ತಂತಿಗಳ…