ಕಾರ್ಕಳ ಉತ್ಸವ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬೋಟಿಂಗ್ ಉತ್ಸವಕ್ಕೆ ಚಾಲನೆ

ಕಾರ್ಕಳ: ಕಾರ್ಕಳ ಉತ್ಸವ ಪ್ರಯುಕ್ತ ಕಾರ್ಕಳ ರಾಮಸಮುದ್ರದಲ್ಲಿ ನಡೆದ ಬೋಟಿಂಗ್ ಉತ್ಸವಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಇಂದು ಚಾಲನೆ ನೀಡಿದರು. ಅವರು ಮಾತನಾಡಿ ಪರಂಪರೆಯ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕಿದೆ. ಸ್ಥಳಿಯ ಕಲೆಗಳನ್ನು ಸಂಸ್ಕೃತಿಯ ಬೆಳಕು ಚೆಲ್ಲುವ ಕೆಲಸವಾಗಬೇಕಿದೆ. ಕಾರ್ಕಳ ಉತ್ಸವದಿಂದ ಜನರ ಮನಸ್ಸು ಗೆಲ್ಲುವ ಕೆಲಸ ಆಗಬೇಕಿದೆ.‌ ಕಾರ್ಕಳದ ಧಾರ್ಮಿಕ ಸಂಸ್ಕೃತಿಯ ಹಿನ್ನೆಲೆಯನ್ನು ಎಲ್ಲೆಡೆ ಪಸರಿಸುವ ಕಾರ್ಕಳ ಉತ್ಸವವಾಗಲಿ ಎಂದು ಅವರು ಹೇಳಿದರು. ಸಭೆಯಲ್ಲಿ ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ರೂಪ ಶೆಟ್ಟಿ, […]