ಅಮೆರಿಕ ಅಧಿವೇಶನಕ್ಕೆ ಕಿರಣ್ ಕುಮಾರ್ ಆಯ್ಕೆ

ಉಡುಪಿ: ಎಲ್ ಐಸಿ ಉಡುಪಿ ವಿಭಾಗದ ಕಿರಣ್ ಕುಮಾರ್ ಬಿ ಕಾರ್ಕಳ ಇವರು 2006ರಿಂದ ದಾಖಲೆ 13 ಬಾರಿ MDRT ಆಗಿ ಆಯ್ಕೆಯಾಗಿ ಇದೀಗ, ಅಮೆರಿಕದ ಲಾಸ್ ಎಜೆಲೀಸ್ ನಲ್ಲಿ ನಡೆಯುವ ಅಧಿವೇಶನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು Cm Club, Galaxy club, MDRT( USA) ಆಗಿದ್ದೂ, ಉಡುಪಿ ವಿಭಾಗ LIC ಯಲ್ಲಿ ಪ್ರಸಿದ್ದಿ ಪಡೆದ್ದಿದ್ದಾರೆ.
ಕಾರ್ಕಳ: ಮಾಳದಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಮರ ಕಪ್ಪೆ ಪತ್ತೆ

ಚಿತ್ರ: ಮನು ಬಿ.ನಕ್ಕತ್ತಾಯ ಉಡುಪಿ: ಅಳಿವಿನಂಚಿನಲ್ಲಿರುವ ‘ಮಲಬಾರ್ ಟ್ರೀ ಟೋಡ್’ (ಮಲಬಾರ್ ಮರ ಕಪ್ಪೆ) ಪ್ರಬೇಧವು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಣ್ಣ ಪಾಪು ಮನೆ ಪರಿಸರದಲ್ಲಿ ಪತ್ತೆಯಾಗಿದ್ದು, ಈ ಮೂಲಕ ಮಾಳ ಅರಣ್ಯ ಪ್ರದೇಶವು ಕಪ್ಪೆಗಳಿಗೆ ಸೂಕ್ತವಾದ ಆವಾಸ ಸ್ಥಾನ ಎಂಬುದಾಗಿ ತಿಳಿದುಬಂದಿದೆ. 2003-04ರ ವರೆಗೆ ಅತ್ಯಂತ ಅಪರೂಪ ಎನಿಸಿದ್ದ ‘ಮಲಬಾರ್ ಟ್ರೀ ಟೋಡ್’ ಕಪ್ಪೆ ಪ್ರಬೇಧವು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ಕಪ್ಪೆ […]
ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಹೃದಯಾಘಾತದಿಂದ ನಿಧನ

ಕಾರ್ಕಳ: ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ (65) ಅವರು ಗುರುವಾರ ನಿಧನ ಹೊಂದಿದ್ದಾರೆ. ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬರುತ್ತಿದ್ದಾಗ ಹೃದಯಾಘಾತವಾಗಿದ್ದು, ಬಸ್ ಮಂಗಳೂರಿನ ನಿಲ್ದಾಣಕ್ಕೆ ತಲುಪಿದಾಗ ನಿಧನರಾಗಿದ್ದರು. ನಿದ್ದೆ ಮಾಡಿದ್ದಾರೆಂದು ಬಸ್ ಕಂಡಕ್ಟರ್ ಕರೆಯುವ ವೇಳೆ ಅವರು ಮೃತಪಟ್ಟಿದ್ದರು. ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದ ಭಂಡಾರಿ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು.
ಕಾರ್ಕಳ: ರಸ್ತೆ, ಚರಂಡಿಗಳ ಮೇಲೆ ಕಟ್ಟಡ ಸಾಮಾಗ್ರಿ ಸಂಗ್ರಹಣೆ ತೆರವುಗೊಳಿಸಿ
ಉಡುಪಿ, ಜೂನ್ 14: ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ನಡೆಸುವವರು ರಸ್ತೆ ಹಾಗೂ ಚರಂಡಿಗಳ ಮೇಲೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಸಂಗ್ರಹಿಸಿಡುವುದರಿಂದ ಮಳೆ ನೀರು ಹರಿದು ಹೋಗಲು ತೋದರೆಯಾಗುತ್ತಿದ್ದು, ಸಾರ್ವಜನಿಕ ರಸ್ತೆ ಹಾಗೂ ಚರಂಡಿ ಮೇಲೆ ಯಾವುದೇ ಕಟ್ಟಡ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದರೆ ತಕ್ಷಣ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಮಳೆಗಾಲ ಮುಗಿಯುವವರೆಗೆ ರಸ್ತೆ ಮೇಲೆ ಸಾಮಾಗ್ರಿಗಳನ್ನು ಸಂಗ್ರಹಿಸದಂತೆ ಮತ್ತು ಹಾಕಿ ಸಂಗ್ರಹಿಸಿದ್ದಲ್ಲಿ ಪುರಸಭೆ ಯಾವುದೇ ಸೂಚನೆ ನೀಡದೇ ತೆರವುಗೊಳಿಸಿ, ದಂಡ […]
ವಿಶ್ವ ಪರಿಸರ ದಿನಾಚರಣೆ ಆಚರಣೆ

ಉಡುಪಿ, ಜೂನ್ 10: ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ವತಿಯಿಂದ ಜೂನ್ 8 ರಂದು ಮುಳ್ಳೂರು ತನಿಖಾ ಠಾಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಪ್ರಯಾಣಿಸುವ ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರ ಸ್ನೇಹಿ ಕಸ ಸಂಗ್ರಹಣಾ ಚೀಲದಲ್ಲಿ ಸಂಗ್ರಹಿಸಿ, ಮುಂದಿನ ತನಿಖಾ ಠಾಣೆಯಲ್ಲಿ ಇಲಾಖಾ ಸಿಬ್ಬಂದಿಗಳಿಗೆ ನೀಡುವ ಬಗ್ಗೆ ಪರಿಸರ ಸ್ನೇಹಿ ಕಸ ಸಂಗ್ರಹಣಾ ಚೀಲವನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿ, ಹೆದ್ದಾರಿಯಲ್ಲಿ ತೆರಳುವ ವಾಹನಗಳಿಗೆ ಸಾಂಕೇತಿಕವಾಗಿ […]