ಕಾರ್ಕಳ: ಕಾರುಗಳು ಮುಖಾಮುಖಿ ಡಿಕ್ಕಿ ಮಹಿಳೆ ಸಾವು
ಕಾರ್ಕಳ: ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ- ಧರ್ಮಸ್ಥಳ ಹೆದ್ದಾರಿಯ ನಲ್ಲೂರು ನಮನ ಬೇಕರಿ ಬಳಿ ನಡೆದಿದೆ. ತಾರ ಸುಬ್ರಾಯ ರಾಯ್ಕರ್( 70) ಮೃತಪಟ್ಟವರು. ಧರ್ಮಸ್ಥಳದಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ತೀರ ಬಲ ಬದಿಗೆ ಚಲಾಯಿಸಿದ ಪರಿಣಾಮವಾಗಿ ಕಾರ್ಕಳದಿಂದ ಧರ್ಮಸ್ಥಳ ಕಡೆಗೆ ಸಾಗುತ್ತಿದ್ದ ಅಶೋಕ್ ಕುರ್ಡೆಕರ್ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಾರ ಸುಬ್ರಾಯ ರಾಯ್ಕರ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಂಡತಿ ಅನುಷಾ ,ಮಾವ ಸುಬ್ರಾಯ ರಾಯ್ಕರ್ […]