ಕಾರ್ಕಳ: ಅನಾರೋಗ್ಯದಿಂದ ಕೂಡಿದ್ದ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ಮೃತ

ಕಾರ್ಕಳ: ಅನಾರೋಗ್ಯದಿಂದ ಕೂಡಿದ್ದ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಬಂದಲ್ಪಾಡಿ ಎಂಬಲ್ಲಿ ನಡೆದಿದೆ. ಉಮೇಶ್ (೫೦) ಎಂಬುವವರು ಮೃತಪಟ್ಟವರು. ಅಸ್ತಮ ಹಾಗು ಫಿಟ್ಸ್ ಕಾಯಿಲೆಯಿಂದ ಬಳಲುತಿದ್ದ ಉಮೇಶ್‌ರವರು ಜ.೧೫ ರಂದು ಹತ್ತಿರದ ಬಂಡಸಾಲೆಯ ತೋಟದ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಶೌಚಕ್ಕೆ ಹೋಗಿದ್ದಾಗ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.