ಕಾರ್ಕಳ: ಶ್ರೀ ಕೃಷ್ಣಾಷ್ಟಮಿ ಸ್ನೇಹ ಮಿಲನ ಕಾರ್ಯಕ್ರಮ

ಕಾರ್ಕಳ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಇದರ ಆಶ್ರಯದಲ್ಲಿ ಆನೆಕೆರೆ ಹಿರಿಯಂಗಡಿಯ ಸೇವಾಕೇಂದ್ರದಲ್ಲಿ ಅ.25  ರಂದು ರಕ್ಷಾ ಬಂಧನ ಹಾಗೂ ಕೃಷಾಷ್ಟಾಮಿ ಸ್ನೇಹ ಮಿಲನ ಕಾರ್ಯಕ್ರಮ ಜರಗಿತು. ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಆರ್. ರಮೇಶ್ ಪ್ರಭು ಕಾರ್ಯಕ್ರಮ  ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ವಿಜಯಲಕ್ಷ್ಮೀ ಅವರು ವಹಿಸಿದ್ದು ರಕ್ಷಾಬಂಧನ ಹಾಗೂ ಶ್ರೀ ಕೃಷಾಷ್ಟಾಮಿಯ ಹಬ್ಬದ ಕುರಿತು ತಿಳಿಸಿದರು.