ಕಾರ್ಕಳದಲ್ಲಿ ಈಶ್ವರೀಯ ವಿದ್ಯಾಲಯದ ಸೇವಾಕೇಂದ್ರದಿಂದ ಶಿವರಾತ್ರಿ ಉತ್ಸವ

ಕಾರ್ಕಳ : ನಿರ್ಮಲ ಪ್ರೇಮವನ್ನು ಹಂಚುವುದರ ಮೂಲಕ ವಿಶ್ವಮಾನವರಾಗಲು ಸಾಧ್ಯ. ಜಗತ್ತಿನಲ್ಲಿ ಋಣಾತ್ಮಕ ಶಕ್ತಿ ಹೆಚ್ಚುತ್ತಾ ಇರುವಂತೆ ನಾವು ಆತ್ಮಶಕ್ತಿಯನ್ನು ಜಾಗೃತಿ ಮಾಡಿಕೊಂಡು ಮುನ್ನಡೆದರೆ ಮಾತ್ರ ವಿಶ್ವಮಾನವತ್ವ ದೊರೆಯುತ್ತದೆ. ಆತ್ಮಶಕ್ತಿ ಜಾಗೃತಿಗೆ ರಾಜಯೋಗ ಶಿಕ್ಷಣ ಪರಿಹಾರವಾಗಬಲ್ಲದು ಎಂದು ಶಿಕ್ಷಕ ಮತ್ತು ಜೇಸೀಸ್ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಕೆ. ಅವರು ಅಭಿಪ್ರಾಯಪಟ್ಟರು.  ಅವರು ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದ ಕಾರ್ಕಳ ಸೇವಾಕೇಂದ್ರದ ವತಿಯಿಂದ ರವಿವಾರ ಇಲ್ಲಿನ ಆನೆಕೆರೆ ಸದ್ಯೋಜಾತ ಪಾರ್ಕ್ ನಲ್ಲಿ  ಆಚರಿಸಿದ ಶಿವರಾತ್ರಿ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ […]