ಕಾರ್ಕಳ: ಶಿರ್ಲಾಲು ಗ್ರಾಮದಲ್ಲಿ ಇಬ್ಬರು ನೀರುಪಾಲು.

ಕಾರ್ಕಳ: ತಾಲೂಕಿನ ಶಿರ್ಲಾಲು ಗ್ರಾಮದ ಮುಗೆರ್ಕಳ ಸಮೀಪದ ಉಬ್ಬರಬೈಲು ಎಂಬಲ್ಲಿ ಮೀನು ಹಿಡಿಯಲು‌‍ ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಮೇ.19 ರಂದು ಸಂಭವಿಸಿದೆ. ನಿವಾಸಿ ಹರೀಶ್ ಪೂಜಾರಿ (48) ಮತ್ತು ಅವರ ಅಕ್ಕನ ಮಗ ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜು ವಿದ್ಯಾರ್ಥಿ ಹೃತೇಶ್ ಪೂಜಾರಿ (18) ಉಬ್ಬರಬೈಲು ಗುಂಡಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಂದರ್ಭ ನೀರಿನ ಸುಳಿಗೆ ಸಿಕ್ಕಿ ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಅಜೆಕಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.