ಕಾರ್ಕಳ: ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ ನಿಧನ.
ಕಾರ್ಕಳ: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ (83) ಸೆ.21 ರಂದು ನಿಧನರಾದರು. ಮುಂಡ್ಕೂರು ಕೃಷ್ಣ ಶೆಟ್ಟಿಯವರಲ್ಲಿ ಹೆಜ್ಜೆಗಾರಿಕೆ ಕಲಿತ ಇವರು, ಮುಂಡ್ಕೂರು ಮೇಳದಲ್ಲಿ ಹವ್ಯಾಸಿ ವೇಷಧಾರಿಯಾಗಿ, ಮುಂದೆ ಉದ್ಯೋಗ ನಿಮಿತ್ತ ಮುಂಬಯಿ ಸೇರಿದರು. ಬಳಿಕ ಯಕ್ಷಗಾನಾಸಕ್ತಿಯಿಂದ ಮತ್ತೆ ಊರಿಗೆ ಬಂದು ಕಟೀಲು ಮೇಳ ಸೇರಿದರು. ಬೆಳ್ಮಣ್ಣು ಮತ್ತು ಬಪ್ಪನಾಡು ಮೇಳಗಳಲ್ಲೂ ಕೆಲವು ತಿರುಗಾಟ ಮಾಡಿದ್ದರು. ಪೀಠಿಕಾ ಮತ್ತು ಒಡ್ಡೋಲಗದ ಪಾತ್ರಗಳಿಂದ ಆರಂಭಗೊಂಡ ಇವರ ಯಕ್ಷ ಪಯಣ, ಮುಂದೆ ಹವ್ಯಾಸಿ ಸಂಘ ಸಂಸ್ಥೆಗಳ ಆಟಗಳಲ್ಲಿ […]