ಕಾರ್ಕಳ: ಪೂರ್ಣಿಮಾ ಲೈಫ್ ಸ್ಟೈಲ್ ಸಂಸ್ಥೆಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಶುಭ ಹಾರೈಕೆ

ಕಾರ್ಕಳ ಜೋಡುರಸ್ತೆಯಲ್ಲಿ ಇದೇ ಮಾ.10ರಂದು ಆರಂಭಗೊಳಲ್ಲಿರುವ ಪೂರ್ಣಿಮಾ ಲೈಫ್‌ಸ್ಟೈಲ್ ಸಂಸ್ಥೆ ಜನಪ್ರಿಯಗೊಳ್ಳಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶುಭ ಹಾರೈಸಿದರು. ಸಂಸ್ಥೆಯ ಉದ್ಘಾಟನಾ ಸಮಾರಂಭದ ಆಹ್ವಾನ ಸ್ವೀಕರಿಸಿದ ಧರ್ಮಾಧಿಕಾರಿಗಳು, ಮಾಲೀಕ ರವಿಪ್ರಕಾಶ್ ಪ್ರಭು ಅವರಿಗೆ ಶುಭಕೋರಿದರು. ಇದೇ ವೇಳೆ ರವಿಪ್ರಕಾಶ ಪ್ರಭು ಅವರಿಗೆ ಶ್ರೀ ಮಂಜುನಾಥ ಸ್ವಾಮಿಯ ಫೋಟೊ ನೀಡಿ ಹೆಗ್ಗಡೆ ಅವರು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪೂರ್ಣಿಮಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಹರಿಪ್ರಸಾದ್ ಪ್ರಭು, ಪ್ರಜ್ವಲ್ ಪ್ರಭು ಇದ್ದರು. […]