ನೆರೆ ಪರಿಹಾರ ನಿಧಿಗೆ ಕಾರ್ಕಳ ಪೊಲೀಸ್ ಠಾಣೆಯಿಂದ ನೆರವು
ಕಾರ್ಕಳ : ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ಅವರ ನೇತೃತ್ವದಲ್ಲಿ ಸರ್ಕಲ್ ಇನ್ಸೆಪೆಕ್ಟರ್ ಹಾಲಮೂರ್ತಿ ರಾವ್, ನಗರ ಠಾಣಾಧಿಕಾರಿ ನಂಜ ನಾಯಕ್, ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ನೆರೆ ಪರಿಹಾರ ನಿಧಿಗೆ ಕಾರ್ಕಳ ಪೊಲೀಸ್ ಠಾಣೆಯಿಂದ ಸುಮಾರು ೧.೫ ಲಕ್ಷರೂ ಮೌಲ್ಯದ ಸಾಮಾಗ್ರಿಗಳ ಕೊಡುಗೆಯನ್ನು ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಗೆ ನೀಡಲಾಯಿತು.