ಕಾರ್ಕಳ: ಓಮ್ನಿ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕಾರ್ಕಳ: ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಪಾದಚಾರಿಗೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯ ದುರ್ಗಾ ಆರ್ಟ್ಸ ಬಳಿ ನಡೆದಿದೆ. ಕರಿಯಶೆಟ್ಟಿ (೬೯) ಮೃತಪಟ್ಟವರು. ಕರಿಯಶೆಟ್ಟಿಯವರು ಜೋಡುರಸ್ತೆ ಕಡೆಯಿಂದ ಹಿರ್ಗಾನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಓಮ್ನಿಯಲ್ಲಿ ಬರುತಿದ್ದ ಚಾಲಕ ಅನಿಲ್ ಎಂಬಾತ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಕರಿಯಶೆಟ್ಟಿ ತೀವ್ರ ತರಹದ ತಲೆಯ ಹಿಂಬದಿ ಮತ್ತು ಸೊಂಟಕ್ಕೆ […]