ಕಾರ್ಕಳ: ಓಮ್ನಿ -ಕಾರು ಮಧ್ಯೆ ಭೀಕರ ಅಪಘಾತ; ಚಾಲಕನಿಗೆ ಗಂಭೀರ ಗಾಯ
ಉಡುಪಿ: ಓಮ್ನಿ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಕಳ ಗೋಮಟೇಶ್ವರ ಬೆಟ್ಟ ಬಳಿ ಇಂದು ಈ ದುರ್ಘಟನೆ ನಡೆದಿದೆ. ಜೋಡುಕಟ್ಟೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಓಮ್ನಿ ಮತ್ತು ಕಾರ್ಕಳ ಕಡೆಯಿಂದ ಬರುತ್ತಿದ್ದ ಕಾರು ಮಧ್ಯೆ ಡಿಕ್ಕಿಯಾಗಿದೆ. ಇದರ ಪರಿಣಾಮ ಓಮ್ನಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಒಳಗಡೆ ಲಾಕ್ ಆಗಿದ್ದ ಕಾರಣ ಗಾಯಾಳು ಚಾಲಕ ಹೊರಬರಲು ಸಾಧ್ಯವಾಗಿಲ್ಲ. ತಕ್ಷಣವೇ ಸ್ಥಳೀಯರು ಜಮಾಯಿಸಿದ್ದು ಕಾರ್ಕಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಓಮ್ನಿ ಡೋರ್ […]