ಭೀತಿ ಹುಟ್ಟಿಸುತ್ತಿದೆ ಕಾರ್ಕಳದ ಮುಂಡ್ಲಿ ಜಲಾಶಯದ ರುದ್ರ ರಮಣೀಯ ನೋಟ

♦ಶ್ರದ್ಧಾ, ಬೆದ್ರಲ್ಕೆ ತೆಳ್ಳಾರ್  ಕಾರ್ಕಳ : ಕಾರ್ಕಳದ ಮುಂಡ್ಲಿ ಜಲಾಶಯ ಕಳೆದ 3-4 ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಕ್ಕಿ ಹರಿದು ರುದ್ರ ರಮಣೀಯವಾಗಿ ಕಾಣಿಸುತ್ತಿದೆ. ಮುಂಡ್ಲಿ ಹಾಗೂ ತೆಳ್ಳಾರ್ ಅನ್ನು ಸಂಪರ್ಕಿಸುವ ಮುಂಡ್ಲಿ ಜಲಾಶಯವು ಸುರಿಯುತ್ತಿರುವ ಭಾರೀ ಮಳೆಗೆ  ಉಕ್ಕಿ ಹರಿಯುತ್ತಿರುವುದು ಚಂದವಾಗಿ ಕಂಡರೂ ಜಲಾಶಯದ ರಭಸದ ಭೀಕರತೆಯಿಂದ ಜನತೆಯಲ್ಲಿ ಭೀತಿ ಹುಟ್ಟಿದೆ. ನದಿಯ ಆಸುಪಾಸಿನಲ್ಲಿರುವ ಹಲವು ತೋಟ, ಗದ್ದೆಗಳು ನೀರಿನ ರಭಸಕ್ಕೆ ಸಿಲುಕಿದೆ. ಹರಿಯುವ ನೀರಿನ ಅದ್ಭುತ ದೃಶ್ಯ ಒಂದೆಡೆಯಾದರೆ, ಹೊಲ ಗದ್ದೆಗಳ ನಾಶ […]