ಕಾರ್ಕಳ: ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ.
ಕಾರ್ಕಳ: ಕಸಬಾ ಗ್ರಾಮದ ಮಹಿಳೆಯೊಬ್ಬರು ಮನನೊಂದು ಅವರ ವಾಸದ ಮನೆಯ ಹತ್ತಿರ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ವೀಣಾ (62) ಎಂದು ಗುರುತಿಸಲಾಗಿದೆ. ಇವರು 13 ವರ್ಷದ ಹಿಂದೆ ಬಿದ್ದು ತಲೆಗೆ ಗಾಯವಾಗಿ ಆಪರೇಶನ್ ಆಗಿದ್ದು ಅದಾದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಜೂ. 6ರಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.