ಕಾರ್ಕಳ: ಮಗನ ಬಂಧನದಿಂದ ಮನನೊಂದ ತಾಯಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ.
ಕಾರ್ಕಳ: ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಗನ ಬಂಧನದಿಂದ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.11ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ನಲ್ಲೂರು ಗ್ರಾಮದ ಪ್ರೇಮ ಎಂದು ಗುರುತಿಸಲಾಗಿದೆ. ಪ್ರೇಮ ಅವರ ಮಗ ಸುಮಂತ್ ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಒಂದೂವರೆ ತಿಂಗಳ ಹಿಂದೆ ವಾರಂಟ್‌ನಲ್ಲಿ ದಸ್ತಗಿರಿ ಮಾಡಿದ್ದರು. ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ಸೆ.11ರಂದು ತಾಯಿ ಪ್ರೇಮ ಜೈಲಿಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದರು. ನಂತರ ಇದೇ ಚಿಂತೆಯಿಂದ ಅವರು ಮನೆಯ ಹತ್ತಿರದಲ್ಲಿರುವ ಹಾಡಿಯಲ್ಲಿ ಮರಕ್ಕೆ […]