ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿ ಪರಾರಿಯಾದ ಕಳ್ಳ

ಉಡುಪಿ: ಚಿನ್ನ ಖರೀದಿ ನೆಪದಲ್ಲಿ ಆಭರಣ ಅಂಗಡಿಗೆ ಬಂದ ಕಳ್ಳನೋರ್ವ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾದ ಘಟನೆ ಕಾರ್ಕಳ ನಗರದ ರಥಬೀದಿಯ ಎಸ್ ಜೆ‌ ಅರ್ಕೆಡ್ ಬಳಿ‌ ನಡೆದಿದೆ. ಚಿನ್ನ ಖರೀದಿಗಾಗಿ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನಿಗೆ ಮಹಿಳಾ ಸಿಬ್ಬಂದಿ ಆಭರಣಗಳನ್ನು ತೋರಿಸಲು ಮುಂದಾಗಿದ್ದಾರೆ. ಈ ವೇಳೆ ಕೈಗೆ ಸಿಕ್ಕ ಚಿನ್ನದ ಸರವನ್ನು ಎಳೆದುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಕಳವಾದ ಕರಿಮಣಿ ಸರ ಸುಮಾರು 30 ಗ್ರಾಂ ತೂಕದ ಚಿನ್ನದ್ದು ಎನ್ನಲಾಗಿದೆ. ಕಳ್ಳತನದ […]

ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್ ಹುಡುಗಿ ನೋಡುತ್ತಿದ್ದಂತೆಯೇ ಸರ ಕದ್ದೊಯ್ದ ಖದೀಮ.!

ಉಡುಪಿ: ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಿಂದ ಸರ ಕಳವು ಮಾಡಿರುವ ಘಟನೆ ಕಾರ್ಕಳ ಮೂರು ಮಾರ್ಗದ ಬಳಿ ಸಂಭವಿಸಿದೆ.ಮೂರು ಮಾರ್ಗದ ಬಳಿ ಇರುವ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ಓರ್ವ ಮಧ್ಯವಯಸ್ಕ ವ್ಯಕ್ತಿ ಬಂದು ಚಿನ್ನದ ಕರಿಮಣಿ ಸರವನ್ನು ತೋರಿಸುವಂತೆ ಹೇಳಿದ್ದಾನೆ. ಅದರಂತೆ ಕೆಲಸದಾಕೆ ಚಿನ್ನದ ಕರಿಮಣಿ ಸರವನ್ನು ನೋಡಲು ಕೊಟ್ಟಿದ್ದರು. ಕೆಲಹೊತ್ತು ಕೆಲಸದ ಹುಡುಗಿ ಜೊತೆ ಮಾತನಾಡಿದ ಆತ ಹುಡುಗಿ ನೋಡುತ್ತಿದ್ದಂತೆಯೇ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ. ಈ ವೇಳೆ ಹುಡುಗಿ ಕಳ್ಳ, ಕಳ್ಳ […]