ಜ. 5: ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ

ಕಾರ್ಕಳ :ಕಾರ್ಕಳದ ಪ್ರಸಿದ್ಧ  ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಜ. ೫ರಂದು ನಡೆಯಲಿದೆ ಎಂದು  ಶಾಸಕ, ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜ.೫ ರ  ಬೆಳಿಗ್ಗೆ ೮ ಗಂಟೆಗೆ ಕಂಬಳ ಮಹೋತ್ಸವದ ಉದ್ಘಾಟನೆ ನಡೆಯಲಿದೆ, ಅಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲ, ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ, ವಿದಾನ ಪರಿಷತ್ ವಿರೋಧ ಪಕ್ಷದ ಸದಸ್ಯ ಕೋಟ ಶ್ರೀನಿವಾಸ […]