ಕಾರ್ಕಳ: ಭಾರತೀಯ ಸೇನೆಗೆ ದುರ್ಗಾಪ್ರಸಾದ್ ಆಯ್ಕೆ.

ಕಾರ್ಕಳ: ಪಳ್ಳಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದುರ್ಗಾಪ್ರಸಾದ್ ಭಾರತೀಯ ಸೇನೆಯಲ್ಲಿ ಅಗ್ನಿಪಥ್‌ ಯೋಜನೆಯಲ್ಲಿ ಆಯ್ಕೆಯಾಗಿದ್ದಾರೆ. ಇವರು ಪಳ್ಳಿ ಬೊಬ್ಬರ ಪಲ್ಕೆ ನಿವಾಸಿ ದಿ.ಜಯರಾಂ ಕುಲಾಲ್ ಮತ್ತು ಶೋಭಾ ಕುಲಾಲ್ ದಂಪತಿ ಪುತ್ರ. ಕಳೆದ ಏಳು ತಿಂಗಳಿನಿಂದ ಬೆಂಗಳೂರಿನ ಎಂಇಜಿ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದು, ಜಮ್ಮು ಕಾಶ್ಮೀರದ ಲಡಾಕ್‌ನಲ್ಲಿ ಕರ್ತವ್ಯ ನಿಭಾಯಿಸಲು ಜೂ. 16ರಂದು ತೆರಳಲಿದ್ದಾರೆ.