ಕಾರ್ಕಳ: ನಾಳೆ (ಜ.26) ನೂತನ ಬಂಟ್ಸ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಉದ್ಘಾಟನೆ

ಕಾರ್ಕಳ: ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಬಂಟ್ಸ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಉದ್ಘಾಟನೆ ಸಮಾರಂಭ ಜ.26 ರಂದು ಪ್ರೈಮ್‌ ಮಾಲ್‌ನ್‌ 1ನೇ ಮಹಡಿಯಲ್ಲಿ ಕಚೇರಿ ಉದ್ಘಾಟನೆಗೊಳ್ಳಲಿದ್ದು, ಉಷಾ ಸೆಲೆಬ್ರೇಷನ್‌ ಹಾಲ್‌ನಲ್ಲಿ ನಾಳೆ ಬೆಳಿಗ್ಗೆ 10:30ಕ್ಕೆ ಉದ್ಘಾಟನಾ ಸಮಾರಂಭ ಜರಗಲಿದೆ. ಕೇಮಾರು ಶ್ರೀ ಸಾಂದೀಪನೀ ಸಾಧನಾಶ್ರಮದ ಶ್ರೀ ಈಶವಿಠಲ ದಾಸ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ ಬ್ಯಾಂಕ್‌ ಉದ್ಘಾಟಿಸಲಿರುವರು. ಎಂಆರ್‌ಜಿ ಗ್ರೂಪ್ಸ್‌ ಅಧ್ಯಕ್ಷ […]