ಕಾರ್ಕಳ: ಮನೆಯ ಬೀಗ ಮುರಿದು ಅಪಾರ ಮೌಲ್ಯದ ಬೆಳ್ಳಿಯ ಸೊತ್ತು ಕಳವು

ಕಾರ್ಕಳ: ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಅಪಾರ ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಕಾರ್ಕಳದ ಕುಕ್ಕುಂದೂರಿನ ಎರ್ಲಪಾಡಿಯಲ್ಲಿ ನಡೆದಿದೆ. ಜ.14 ರಂದು ರಾತ್ರಿ ಮನೆಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಕೋಣೆಯ ಕಪಾಟಿನಲ್ಲಿರಿಸಿದ್ದ ಸುಮಾರು 35,000 ರೂ. ಮೌಲ್ಯದ ಸುಮಾರು 850 ಗ್ರಾಂ ಬೆಳ್ಳಿಯ ಸೊತ್ತುಗಳನ್ನು ಹಾಗೂ 5,000 ರೂ. ಮೌಲ್ಯದ ಕೈಗಡಿಯಾರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಜೇಂದ್ರ ನಾಯಕ್‌ ಅವರು ನೀಡಿದ ದೂರಿನಂತೆ ಕಾರ್ಕಳ […]