ಕಾರ್ಕಳ: ಪಾರಂಪರಿಕ ಗೋ ಸಂವರ್ಧನೆ ಮತ್ತು ದೇಸೀ ತಳಿಗಳ ಗೋ ಶಾಲೆಗೆ ದೇಣಿಗೆ ಸಂಗ್ರಹಕ್ಕಾಗಿ ಮನವಿ

ಕಾರ್ಕಳ: ದೇಸೀ ತಳಿಗಳ ಗೋ ಸಂವರ್ಧನೆ ಮತ್ತು ಗೋ ಸಾಕಣೆ ಅಪರೂಪವಾಗಿರುವ ನಡುವೆ ಆಶಾಕಿರಣದಂತೆ ಕಾರ್ಕಳ ನಗರ ಮಧ್ಯೆ ಬಂಡೀಮಠ ಬಸ್ ನಿಲ್ದಾಣದ ಸನಿಹ ದೇಸೀ ತಳಿಗಳ ಗೋ ಶಾಲೆಯೊಂದು ಅಸ್ತಿತ್ವದಲ್ಲಿದೆ. ನಗರದಲ್ಲಿ ವಾಸ್ತವ್ಯವಿರುವ ವೈದಿಕ ಗೋಪಿನಾಥ ಪುರಾಣಿಕ ದಂಪತಿ ಬಂಡೀಮಠದ ತಮ್ಮ ನಿವಾಸದಲ್ಲೇ ಕಳೆದ ೬ ವರ್ಷಗಳಿಂದ ಇಂಥದ್ದೊಂದು ಸಾಹಸವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ.ಗೋವುಗಳು ಇದ್ದವು, ಗೋ ಶಾಲೆ ಕಟ್ಟಡವಿರಲಿಲ್ಲ. ಆದರೂ ತಗಡಿನ ಶೀಟು ಹೊದಿಸಿದ ತನ್ನ ವಾಸದ ಮನೆಯನ್ನೇ ಗೋ ಶಾಲೆಯಾಗಿ ಬಳಸಿ ಗೋವುಗಳ ಜೊತೆಗೇ […]