ಕಾರ್ಕಳ ಉತ್ಸವ: ಮಾ.22ರ ವರೆಗೆ ಮುಂದುವರಿಕೆ
ಕಾರ್ಕಳ: ಕಾರ್ಕಳ ಉತ್ಸವದ ಆಹಾರ ಮೇಳ, ವಸ್ತು ಪ್ರದರ್ಶನ ಹಾಗೂ ದೀಪಾಲಂಕಾರವನ್ನು ಮಾ. 22 ಮಂಗಳವಾರದವರೆಗೆ ಮುಂದುವರಿಸಲಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಾರ್ಕಳ ಉತ್ಸವವು ಮಾ.10ರಿಂದ 20ರ ವರೆಗೆ ನಡೆಯಲು ನಿರ್ಧಾರ ಹೊಂದಿದ್ದು, ಆದರೆ ಬಹು ಜನರ ಬೇಡಿಕೆ ಮೇರೆಗೆ ಪುನಃ 2 ದಿನ ಹೆಚ್ಚುವರಿ ನಡೆಯಲಿದೆ.