ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಂದ ಹೆಬ್ರಿಯಲ್ಲಿ ಭರ್ಜರಿ ಮತಬೇಟೆ: ಹೆಬ್ರಿಯ ಜನರಿಗೆ ಸಮೃದ್ದ ಭರವಸೆ
ಹೆಬ್ರಿ: ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಲು ಉದಯ ಶೆಟ್ಟಿ ಅವರು ವಿಧಾನಸಭಾ ಚುನಾವಣೆ ಪ್ರಯುಕ್ತ ಹೆಬ್ರಿಯಲ್ಲಿ ಭರ್ಜರಿಯಾಗಿ ಮತಯಾಚನೆ ಮಾಡಲಾಯಿತು.ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ನಡೆಸಿ ಬರುವ ಮೇ.10 ರಂದು ತಮಗೆ ಮತವನ್ನು ನೀಡಿ ಒಂದು ಅವಕಾಶವನ್ನು ಕೊಟ್ಟು ಆಶೀರ್ವದಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಹೆಬ್ರಿಯ ಅಭಿವೃದ್ಧಿಯ ಕುರಿತು ಸಮೃದ್ಧ ಯೋಚನೆಗಳ ಪ್ರಸ್ತಾವವನ್ನು ಮಾಡಿ,ಹೆಬ್ರಿ ಮತದಾರರಲ್ಲಿ ಭರವಸೆ ಮೂಡಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.