ಕಾರ್ಕಳ ಕ್ರೈಸ್ಟ್ ಕಿಂಗ್’ನಲ್ಲಿ ಶಿಕ್ಷಕರ ದಿನಾಚರಣೆ; ಮಾನವೀಯ ಮೌಲ್ಯಗಳ ಅಧಃಪತನದಿಂದಾಗಿ ಗುರು-ಶಿಷ್ಯ ಸಂಬಂಧವು ಕುಸಿಯುತ್ತಿದೆ: ಎಸ್ ಎಲ್ ಭೋಜೇಗೌಡ

ಕಾರ್ಕಳ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ನೂತನ ಕಾಲೇಜುಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಭೋಜೆಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಪ್ರಸ್ತುತ ಸಮಾಜ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ಇದರಿಂದಾಗಿ ಗುರು ಶಿಷ್ಯ ಸಂಬಂಧದ ಮೌಲ್ಯ ಕೂಡಾ ಕುಸಿಯುತ್ತಿದೆ. ಇಂದು ಸಂಬಂಧಗಳನ್ನು ಹಣದ ಮೂಲಕ ಅಳೆಯುತ್ತಿರುವುದು ಖೇದಕರ ವಿಷಯ, […]