ಕಾರ್ಕಳದಲ್ಲಿ ಮತ್ತೆ ಗೋ ಕಳ್ಳತನ: ದುಷ್ಕರ್ಮಿಗಳು ಕಾರಿನಲ್ಲಿ ದನ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕಾರ್ಕಳ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಗೋಕಳ್ಳರು ಇದೀಗ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಯುಗಾದಿ ಹಬ್ಬದ ದಿನದಂದೇ ಗೋಕಳ್ಳರು ಅಟ್ಟಹಾಸ ಮೆರೆದಿದ್ದಾರೆ. ಹೌದು, ಕಾರ್ಕಳ ಬಂಗ್ಲೆಗುಡ್ಡೆ ಶ್ರೀ ವಿದ್ಯಾಸರಸ್ವತಿ ಮಂದಿರದಲ್ಲಿ ಬಳಿ ಏ.2ರ ಶನಿವಾರ ಬೆಳಗಿನ ಜಾವ 2-45ರ ಸುಮಾರಿಗೆ ಕಾರೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ದನವೊಂದನ್ನು ಹಿಡಿದು ಕದ್ದೊಯ್ದಿದ್ದಾರೆ. ದನವನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋ ಕಳ್ಳರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಕಾರ್ಕಳದ ವಿಶ್ವಹಿಂದು ಪರಿಷತ್- ಬಜರಂಗದಳ […]